
1st April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.31-ತಾಲೂಕಿನ ಕಲಾದಗಿಯಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಿದರು.
ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಈ- ದುಲ್- ಫಿತರ್ (ರಂಜಾನ್) ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ಕೋರಿದರು.
ಮೌಲಾನಾ ಫಯಾಜ್ ಅಹ್ಮದ್ ಖಾಜಿ, ರಂಜಾನ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವದ ಕುರಿತು ಬೋಧನೆ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗರ, ಅಂಜುಮನ್ ಮಿಲತ್ ಕಮಿಟಿ ಅಧ್ಯಕ್ಷ ರಫೀಕ್ ಬೇಪಾರಿ, ಉಪಾಧ್ಯಕ್ಷ ಚಾಂದ್ಸಾಬ್ ಕಲಾದಗಿ, ಆರ್.ಆರ್.ಗೋಟೆ, ಇಬ್ರಾಹಿಂ ಸೋಲ್ಜರ್, ಸೈಪುದೀನ ನದಾಫ, ಬಂದೇನವಾಜ ಸೌದಾಗರ, ಹಸನ್ ಅಹಮದ್ ರೋಣ, ರೈಮಾನ್ ಸಾಬ ಬಾರೂದವಾಲೆ, ಎಚ್.ಎಮ್. ಹೊಸಕೋಟಿ, ಬಂದೇನವಾಜ್ ಮನಿಯಾರ, ಎ.ಡಿ.ಅಡ್ವಾನಿ, ದಿವಾನಸಾಬ ಕಾಲೇಸಾಬಣ್ಣವರ, ಎ.ಎಚ್.ಬೀಳಗಿ ಇದ್ದರು.
ಏಪ್ರಿಲ್ ಫೂಲ್ ಮಾಡುವ ಬದಲು ಏಪ್ರಿಲ್ ಕೂಲ್ ಮಾಡುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ....... ಶರಣಬಸಪ್ಪ ಮುಖ್ಯಗುರುಗಳು